ABOUT OUR BLOG

“ಹಿಂದಿ ಶಿಕ್ಷಕ್ ಸಹಾಯಿಕ ಬ್ಲಾಗ್. ಕಾಂ”



                                              ಕೊರೋನ ಸಂಕಷ್ಟದಲ್ಲಿ ಕರ್ನಾಟಕ ರಾಜ್ಯದ ಪ್ರೌಢಶಾಲೆಯ ಮಕ್ಕಳಿಗೆ ಕಲಿಕೆಗೆ  ಕೊರತೆಯಾಗದಂತೆ  ಮಾಡಲು ಹಾಗೂ ಮಕ್ಕಳಲ್ಲಿ ಕಲಿಕಾಸಕ್ತಿ  ಹೆಚ್ಚಿಸುವ ಜೊತೆಗೆ  ಹಿಂದಿ  ಭಾಷಾ  ಕಲಿಕೆಗೂ ಸಹಕಾರಿಯಾಗುವ  ನಿಟ್ಟಿನಲ್ಲಿ  ಕರ್ನಾಟಕ   ರಾಜ್ಯದ    ತೃತೀಯ    ಭಾಷೆ  ಹಿಂದಿ ಬೋಧಿಸುವ   ಸಂಪನ್ಮೂಲ   ಶಿಕ್ಷಕರು   ಸೇರಿಕೊಂಡು   “ಹಿಂದಿ ಶಿಕ್ಷಕ್ ಸಹಾಯಕ”   ಎನ್ನುವ ಬ್ಲಾಗ್ (ವೆಬ್‌ಸೈಟ್ಮಾದರಿ) ಹಾಗೂ ಮೊಬೈಲ್ ಆಪ್ (Mobile APPP) ಅನ್ನು ಅಭಿವೃದ್ಧಿಪಡಿಸಿದ್ದಾರೆ.

    ಈ ಬ್ಲಾಗ್ ಹಾಗೂ ಮೊಬೈಲ್ ಆಪ್ |ಅನ್ನು ಸಿದ್ಧಪಡಿಸಿರುವುದರಿಂದ ಹಿಡಿದು ಅಭಿವೃದ್ಧಿಪಡಿಸಿರುವ ವರೆಗಿನ ಜವಾಬ್ದಾರಿಯನ್ನು ವಹಿಸಿಕೊಂಡವರು  ಸರ್ಕಾರಿ ಶಾಲೆಯ ಶಿಕ್ಷಕರು ಎನ್ನುವುದು ವಿಶೇಷ. ಈ ಬ್ಲಾಗ್‌ನಲ್ಲಿ ಹಾಗೂ ಮೊಬೈಲ್ ಆಪ್‌ನಲ್ಲಿ 10, 9 ಹಾಗೂ 8 ನೇ ತರಗತಿಗೆ ಸಂಬಂಧಿಸಿದ ಸೇತುಬಂಧ, ಪಾಠಗಳಿಗೆ ಹಾಗೂ ಪದ್ಯ ಭಾಗಕ್ಕೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ (PPT), ಯೂಟೂಬ್    ಲಿಂಕ್ ನೀಡಿರುವ ವೀಡಿಯೋಗಳು, ಪಾಠಗಳಿಗೆ ಸಂಬಂಧಿಸಿದ ನೋಟ್ಸ್ಗಳು, ವ್ಯಾಕರಣ, ಹಿಂದಿ ಕಲಿಯಲು ಬೇಸಿಕ್ ಹಿಂದಿ ಲಿಂಕ್‌ನ ಜೊತೆಗೆ ಶಿಕ್ಷಕರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಪಾಠಯೋಜನೆ, ಪಾಠ ಟಿಪ್ಪಣಿ, ಶಿಕ್ಷಕರಿಗೆ ಬೇಕಾಗಿರುವ ಉಪಯುಕ್ತ ರಿಜಿಸ್ಟರ್‌ಗಳು, ನಮೂನೆಗಳು, ಶಾಲಾಭಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಪ್ರಶ್ನೆ ಪತ್ರಿಕೆಗಳು, ನೀಲಿ ನಕಾಶೆ, PDF  ಪಠ್ಯ ಪುಸ್ತಕಗಳ ಲಿಂಕ್, ಶಿಕ್ಷಕರಿಗೆ ಉಪಯುಕ್ತವಾಗಿರುವ    ವೆಬ್‌ಸೈಟ್‌ಗಳ     ಲಿಂಕ್,      ಶಿಕ್ಷಕರಿಗೆ   ಉಪಯುಕ್ತವಾಗಿರುವ  ವೀಡಿಯೋಗಳು, ಕ್ರಿಯಾ ಯೋಜನೆ, ಶಬ್ದಕೋಶ, ಅನುವಾದದ ಲಿಂಕ್, ಇ-ನ್ಯೂಸ್ ಪೇಪರ್, ತೃತೀಯ ಭಾಷೆ ಹಿಂದಿ  ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬ್ಲಾಗ್ ಗಳ ಲಿಂಕ್ ಇವೆಲ್ಲದರ ಜೊತೆಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ  ಅನುಕೂಲವಾಗುವ ನಿಟ್ಟಿನಲ್ಲಿ ಅನ್ಯ ವಿಷಯಗಳ ಬ್ಲಾಗ್ ಲಿಂಕ್ ಅನ್ನು ಸಹ ನೀಡಲಾಗಿದೆ. ಇದರಿಂದ ಅನ್ಯ ವಿಷಯ ಬೋಧಿಸುವ ಶಿಕ್ಷಕರು ಸುಲಭವಾಗಿ ತಮ್ಮ ವಿಷಯಗಳ ಬ್ಲಾಗ್ ಅನ್ನು ಬಳಸಿಕೊಳ್ಳಬಹುದು. ಇದರ ಜೊತೆಗೆ ಶಿಕ್ಷಕರ ಬಳಿ ಇರುವ  ಪಾಠೋಪಕರಣಗಳನ್ನು ಅಥವಾ ಇತರೆ ದಾಖಲೆಗಳನ್ನು ಈ ಬ್ಲಾಗ್‌ನಲ್ಲಿ ಸೇರಿಸಲು ಇಚ್ಚಿಸಿದರೆ ಅದಕ್ಕೂ ಸಹಾ ಅಪ್‌ಲೋಡ್ ವ್ಯವಸ್ಥೆ ನೀಡಲಾಗಿದೆ ಹಾಗೆಯೇ ಶಿಕ್ಷಕರಿಗೆ ಸಂದೇಹಗಳುಂಟಾದರೆ ಈ ಬ್ಲಾಗ್‌ನ ಸಂಪನ್ಮೂಲ ಶಿಕ್ಷಕರು ಉತ್ತರಿಸುವ ಅವಕಾಶ ಕಲ್ಪಿಸಲಾಗಿದೆ.

    ಈ ಶಿಕ್ಷಕರ ಸಾಧನೆಯನ್ನು ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾನ್ಯ ಕೆ.ರತ್ನಯ್ಯ ರವರು ಶ್ಲಾಘಿಸಿ ತಮ್ಮ ಅಮೃತ ಹಸ್ತದಿಂದ ಈ ಬ್ಲಾಗ್   ಹಾಗೂ  ಮೊಬೈಲ್  ಆಪ್‌ಗೆ  ಚಾಲನೆ  ನೀಡಿದರೆ,  ಕೋಲಾರ  ಜಿಲ್ಲೆಯ  ಸಾರ್ವಜನಿಕ
ಶಿಕ್ಷಣ ಇಲಾಖೆಯ ಉಪನಿರ್ದೇಶರ ಕಛೇರಿಯ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಎ.ಎನ್. ನಾಗೇಂದ್ರ ಪ್ರಸಾದ್ ರವರು ಶಿಕ್ಷಕರಿಗೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಅಗತ್ಯ ಸಹಕಾರ ನೀಡಿರುವುದಕ್ಕೆ ಸಂಪನ್ಮೂಲ ಶಿಕ್ಷಕರು ಕೃತಘ್ನತೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಎ. ರಾಜಗೋಪಾಲಚಾರ್ ರವರು ಶಿಕ್ಷಕರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇವರೆಲ್ಲರ ಅಭಿಪ್ರಾಯದಂತೆ ಈ ಬ್ಲಾಗ್ ಶಿಕ್ಷಕರ ಹಾಗೂ ವಿದ್ಯಾರ್ಥಿಳ ಸಂದೇಹ ನಿವಾರಣೆಗೆ ಒಂದೇ ಕಿಂಡಿಯಾಗಿ ಕೆಲಸ ಮಾಡಲಿದೆ.



ಬ್ಲಾಗ್‌ನ ರೂವಾರಿಗಳು;

       ಈ ಬ್ಲಾಗ್ ಹಾಗೂ ಮೊಬೈಲ್ ಆಪ್ ಸಿದ್ಧಪಡಿಸಿರುವ  ಶ್ರೀ ಮನೋಹರ್  ಹಾಗೂ ಇದನ್ನು      ಅಭಿವೃದ್ಧಿ      ಪಡಿಸಿರುವ       ಶಿಕ್ಷಕರು       ಶ್ರೀ ಹೆಚ್.ಎನ್. ದೇವರಾಜು  ಮಂಡ್ಯ,  ಡಾ. ಪದ್ಮಿನಿ ಮೈಸೂರು,   ಶ್ರೀ ಶ್ರೀಕೃಷ್ಣಶೆಟ್ಟ ಬಳ್ಳಾರಿ,  ಶ್ರೀ ವೇಣುಗೋಪಾಲ   ಕೋಲಾರ,      ಶ್ರೀ ಅನ್ವರ್ ಹುಸೇನ್ ಸನದಿ    ಧಾರವಾಡ,         ಶ್ರೀ ಆನಂದ ನಾಯಕ್      ಉತ್ತರ ಕನ್ನಡ,    ಶ್ರೀ ಶ್ರೀನಿವಾಸ ನಾಯಕ್ ಉತ್ತರ ಕನ್ನಡ,  ಶ್ರೀ ರಾಜಕುಮಾರ್ ಬೀದರ್,  ಶ್ರೀ ಪರಶುರಾಮ್ ಹೊನ್ನಕ್ಕಟ್ಟಿ ಚಿಕ್ಕೋಡಿ,  ಶ್ರೀ ನಾಗಲಿಂಗಯ್ಯ ಮಧುಗಿರಿ ಮುಂತಾದವರು.


ಕೋಲಾರ ಜಿಲ್ಲೆಯ ಮಾನ್ಯ ಉಪನಿರ್ದೇಶಕರಾದ ಕೆ ರತ್ನಯ್ಯ ಹಾಗೂ   ಶಿಕ್ಷಣಾಧಿಕಾರಿಗಳಾದ  
ಶ್ರೀಯುತ  ನಾಗೇಂದ್ರ ಪ್ರಸಾದ್ ಎ.ಎನ್  ಹಿಂದಿ ಶಿಕ್ಷಕ್ ಸಹಾಯಕ ಬ್ಲಾಗ್ ಗೆ ಚಾಲನೆ ನೀಡುತ್ತಿರುವ ದೃಶ್ಯ.


ಹಿಂದಿ ಶಿಕ್ಷಕ್ ಸಹಾಯಿಕ ಆ್ಯಪ್ ಬಗ್ಗೆ ಸುದ್ದಿ ವಾಹಿನಿಗಳಲ್ಲಿ  ಪ್ರಕಟಗೊಂಡ ಬಗ್ಗೆ ..

************************************
************************************
************************************

 ಹಕ್ಕುಸ್ವಾಮ್ಯ ಘೋಷಣೆ
“ಹಿಂದಿ ಶಿಕ್ಷಕ್ ಸಹಾಯಿಕ ಬ್ಲಾಗ್. ಕಾಂ”
     ಈ ಬ್ಲಾಗಿನಲ್ಲಿರುವ ಸಂಪನ್ಮೂಲಗಳನ್ನು ಶೈಕ್ಷಣಿಕ ಬಳಕೆಯ ಉದ್ದೇಶದಿಂದ ಮಾತ್ರ ತಯಾರಿಸಲಾಗಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ ಮತ್ತು ಯಾವುದೇ ವ್ಯವಹಾರಿಕ ಉದ್ದೇಶಕ್ಕೆ ಬಳಸುವಂತಿಲ್ಲ. ಅನೇಕ ಸಂಪನ್ಮೂಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಒಂದು ವೇಳೆ ಯಾವುದೇ ಹಕ್ಕುಸ್ವಾಮ್ಯದ ಸಂಪನ್ಮೂಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಅದನ್ನು ತೆಗೆದು ಹಾಕಲಾಗುವುದು.





2 comments:

Sanjeev Deshpande said...

ತಮ್ಮ ಈ ಪ್ರಯತ್ನ ತುಂಬ ಶ್ಲಾಘನೀಯ.ಶುಭಾಶಯಗಳು.

Unknown said...

ನಿಮ್ಮ ಈ ಶೈಕ್ಷಣಿಕ ಕಾರ್ಯವನ್ನು ಮೆಚ್ಚಲೇ ಬೇಕು. ಶುಭವಾಗಲಿ..